Saturday, March 27, 2010

ಮೂಡಿಗೆರೆ ಮೋಡಿಗಾರ

ಕಾಡಿನೊಡಲ ಗರ್ಭದಲ್ಲಿ
ಗೂಡು ಕಟ್ಟಿಕೊಂಡು ಅಲೆದು
ಗೂಢನೆಲ್ಲ ಬಿಚ್ಚಿಯಿಟ್ಟ ಮಾಯಗಾರನೆ !
ಜೇಡ ಚಿಟ್ಟೆ ಹಕ್ಕಿ ಹುಳುಗ
ಳೇಡಿ ಕಪ್ಪೆ ಹಾವು ಮೀನ
ನಾಡಿಮಿಡಿತ ಹರಿಯ ಬಿಟ್ಟ ಪೂರ್ಣಚಂದ್ರನೆ !

ಹಾರು ಓತಿ ಬೆನ್ನುಹತ್ತಿ
ಮೇರು ಗಿರಿಯ ಸುತ್ತಿ ಜಗದ
ಬೇರುಗಳನು ಹುಡುಕಿ ಕೊಟ್ಟ ಮೋಡಿಗಾರನೆ !
ಮೀರಿ ಹರಿವ ನೈಲ ನದಿಯ
ಹಾರು ತಟ್ಟೆ ಕುಬ್ಜ ಜನರ
ಭಾರಿ ಕತೆಯ ಸೂರೆಗೈದ ಕಾಡ ಸಂತನೆ !