Thursday, February 25, 2010

Tuesday, February 16, 2010

ಶಾಲೆ ಕಲಿವ ಹುಡುಗ ಹುಡುಗಿ
ಖಾಲಿ ಕೈಯಲಿರದಲೊಂದು
ಜೋಲುತಿರುಮೊಬೈಲು(ವ ಫೋನು)ಹಿಡಿದು ಲಲ್ಲೆಗರೆವರು !
ಕಾಲವನ್ನು ವ್ಯರ್ಥವಾಗಿ
ಪೋಲುಮಾಡುತಿರುವರೆಲ್ಲ
ಸೋಲಲಾರರೀಗಯಿವರು ಯಾರ ಮಾತಿಗು !

ಬಾಲಹಸುಳೆ ಮಕ್ಕಳೆಲ್ಲ
ಲೀಲೆಯಿಂದಲಾಟವಾಡ್ದೆ
ಜೋಲುಮುಖವ ಹೊತ್ತು ಶಾಲೆ ದಾರಿ ಹಿಡಿವರು !
ಶಾಲೆ ಮೇಷ್ಟ್ರು ಬಾಳ ಸ್ಟ್ರಿಕ್ಟು
ಕೋಲು ಹಿಡಿದು ಹಾಕ್ವರೇಟು
ಜೇಲಿಗಿಂತ ಕಷ್ಟವಿಲ್ಲಿ ಪಡೆಯುತಿರುವರು !

ಬಾಲರೆಲ್ಲ ಲೀಲೆಯಿಂದ
ಚೀಲ ಹೊತ್ತು ಶಾಲೆಗೋಗ್ವ
ಕಾಲವಿಂದು ಮಾಯವಾಗಿ ಮೂಲೆ ಸೇರಿತು !
ಶಾಲೆಯೀಗ ಜೇಲಿನಂತೆ
ಶೂಲದಿಂದಲಿರಿಯುವಾಗ
ಬಾಲ ಮನಸು ಬಾಳ ನೊಂದು ಗಾಸಿಗೊಂಡಿತು !

ನಾಡ ಮಂತ್ರಿ ಯಡೂರೆಪ್ಪ
ಕೇಡು ಬಗೆವ ದ್ರೋಹಿ ಅವನು
ಖೋಡಿಯಾಗಿ ಖೇಣಿಗಿಂಬು ಕೊಡುತಲಿರುವನು !
ಬೀಡಿನೊಡೆಯ ರೈತರನ್ನು
ನೋಡಲಾರನೆಂದು ಹೇಳಿ
ಗೌಡ ತಾನು ಸಿದ್ಧನಾಗಿ ಕದನಕಿಳಿದನು !

ಕಾರಿಡಾರುಯೆನುತಗೌಡ
ಏರಿ ಹೋಗಿ ಖೇಣಿ ಮೇಲೆ
ಭಾರಿ ಯುದ್ಧವನ್ನೆ ಸಾರಿ ಹೋರುತಿರುವನು !
ಯಾರು ಆಜ್ಞೆ ಕೊಟ್ಟರಿದಕೆ
ಯಾರ ಪಾಲಿಗೆಷ್ಟುಲಾಭ
ಘೋರನರಕದಲ್ಲಿ ರೈತ ಬಳಲುತಿರುವನು !
ಕೋಟಿ ಲಾಭ ತಂದು ಕೊಟ್ರು
ಬೀಟಿ ಬದನೆ ವಾಸ್ನೆ ಬೇಡ
ಮೇಟಿ ವಿದ್ಯೆ ಮಾನ ಉಳಿಸಿ ಪಟ್ಟಭದ್ರರೆ !
ಬೀಟಿ ಹತ್ತಿ ಬೆನ್ನು ಹತ್ತಿ
ಕೋಟಿ ಬೆಲೆಯ ದೇಸಿ ತಳಿಯ
ನಾಟಿ ಬೀಜ ನಾಶ ಮಾಡ್ದ ಪುಣ್ಯವಂತರೆ !